Home

 

ನರೇಗಲ್ಲ  ಸ್ಥಳೀಯ ಸಂಸ್ಥೆಯ ಬಗ್ಗೆ

                           ನರೇಗಲ್ಲ  ಸ್ಥಳೀಯ ಸಂಸ್ಥೆಯ 1973 ರಲ್ಲಿ ಪಟ್ಟಣ ಪಂಚಾಯಿತಿಯಾಯಿತು. ಪಟ್ಟಣದ ಜನಸಂಖ್ಯೆ 2001 ಜನಗಣತಿಯಂತೆ 16685. ಪಟ್ಟಣಲ್ಲಿ 17 ವಾರ್ಡ್ ಗಳಿದ್ದು ಅಷ್ಟೇ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳು ಆಗಿರುತ್ತಾರೆ. ಹಾಗೂ 3 ಜನ ನಾಮನಿರ್ದೇಶನ ಸದಸ್ಯರಿರುತ್ತಾರೆ. ಪಟ್ಟಣವು 22.50 .ಕಿ.ಮೀ. ವ್ಯಾಪಿಸಿದೆ. ಮತ್ತು ಗದಗನಿಂದ 30 ಕಿ.ಮೀ. ದೂರದಲ್ಲಿದೆ ಪಟ್ಟಣಕ್ಕೆ ಬೋರವೆಲ್ ನಿಂದ ನೀರು ಸರಬರಾಜು ಮಾಡಲಾಗುತ್ತದೆ.

                            ನರೇಗಲ್ಲ ವ್ಯಾಪ್ತಿಯಲ್ಲಿ 5 ಮಜರೇ ಗ್ರಾಮಗಳು ಬರುತ್ತವೆ.  ಅವುಗಳೆಂದರ, ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ದ್ಯಾಂಪೂರ ಹಾಗು ಮಲ್ಲಾಪೂರ  ಇಲ್ಲಿನ ಜನರ ಪ್ರಮುಖ ವೃತ್ತಿ ವ್ಯವಸಾಯವಾಗಿದ್ದು, ಮೆಕ್ಕೆಜೋಳ, ಸೂರ್ಯಕಾಂತ, ಹತ್ತಿ, ಜೋಳ, ಶೇಂಗಾ, ಗೋಧಿ ಮತ್ತು ಕಡಲೇ ಪ್ರಮುಖ ಬೆಳೆಗಳಾಗಿವೆ. ನರೇಗಲ್ಲ ಪ್ರವಾಸಿ ತಾಣಗಳಾದ ಹುಚ್ಚಿರೇಶ್ವರ ಮಠ,  ಚಂದ್ರಮೌಳೇಶ್ವರ ಗುಡಿ ಹಾಗೂ ರಹಿಮಾನ ಖಲೀಫರ್ ದರಗಾದಂತ ಮುಂತಾದ ಪ್ರಸಿದ್ದ ಸ್ಥಳಗಳಿವೆ


ಗಣಕೀಕರಣದ ಬಗ್ಗೆ ಜನನ-ಮರಣ

                                                ಪಟ್ಟಣ ಪಂಚಾಯಿತಿಯು 1990 ರಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ಸಾರ್ವಜನಿಕರು ಕಛೇರಿಯ ಅಧಿಕೃತ ವೆಬ್ ಸೈಟ್ ಮೂಲಕ ಪರಿಶೀಲಿಸಬಹುದಾಗಿದೆ. ಹಾಗೂ ಜನನ - ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆಂದು   ತಿಳಿಸಲು ಹರ್ಷಿಸುತ್ತೇವೆ. ಜನನ-ಮರಣ ನೊಂದಣಿಯಾದ ದಾಖಲೆಗಳು ವಿಕ್ಷೀಸಲು ಈ ಮುಂದಿನ ವೆಬ್ಸೈಟ್ ಲಿಂಕ್ ನ್ನು ಮುಖಾಂತರ ಪರಿಶೀಲಿಸಬಹುದಾಗಿದೆ.  http://www.naregaltown.mrc.gov.in/egbnd/SearchReports.do

ಸಾರ್ವಜನಿಕ ದೂರು ವಿವರಣಾ ಕೇಂದ್ರ

                                                       ಕೆ.ಎಂ.ಆರ್.ಪಿ ಯೋಜನೆಯಡಿ ನರೇಗಲ್ಲ ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕ ದೂರು ನಿವಾರಣಾ ಕೇಂದ್ರ ತೆರಯಲಾಗಿದ್ದು, ಈ ಕೇಂದ್ರವು ವಾರದ 7 ದಿನಗಳು ಹಾಗೂ ದಿನದ 12 ಘಂಟೆ ಕಾರ್ಯನಿರ್ವಹಿಸಿತ್ತಿರುತ್ತದೆ. ಸಾರ್ವಜನಿಕರು ದೂರುಗಳನ್ನು ಪತ್ರ, ದೂರವಾಣಿ ಹಾಗೂ ಆನಲೈನ್ ಅಪ್ಪಿಕೇಶನ್ ಮೂಲಕ ಸಲ್ಲಿಸಬಹುದಾಗಿದೆ. ಸಹಾಯವಾಣಿ 08381 - 268228.   ವೆಬ್ಸೈಟ್ ಲಿಂಕ್ ನ್ನು ಮುಖಾಂತರ ಪರಿಶೀಲಿಸಬಹುದಾಗಿದೆ.    http://www.naregaltown.gov.in/pgr/grievance-redressal.jsp 

ಕಛೇರಿ ವೆಬ್ ಸೈಟ್  

                                           ನರೇಗಲ್ಲ ಪಟ್ಟಣ ಪಂಚಾಯತಿ ಅಧಿಕೃತ ವೆಬ್ಸೈಟ್ ಹೊಂದಿದ್ದು, http://www.naregaltown.gov.in  ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ. ಹಾಗೂ ನಿಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು Comments/Suggestins ಮುಖಾಂತರ ಸಲ್ಲಿಸಬಹುದಾಗಿದೆ. 

ಆಸ್ತಿ ಭೌಗೋಳಿಕ

 ಪಟ್ಟಣ ಪಂಚಾಯಿತಿಯು ಆಸ್ತಿಗಳನ್ನು ಅತೀ ಶೀಘ್ರದಲ್ಲಿ ಆನಲೈನ್ಸ್ನಲ್ಲಿ  ಅಳವಡಿಸಲಾಗುವುದು

http://www.naregaltown.mrc.gov.in/ptisnn/public/citizenIndex.jsp

 


ದ್ವಿ ನಮೂದು ಲೆಕ್ಕ ಪದ್ದತಿ

ಪಟ್ಟಣ ಪಂಚಾಯಿತಿಯು ಆಸ್ತಿಗಳನ್ನು ಅತೀ ಶೀಘ್ರದಲ್ಲಿ ಆನಲೈನ್ಸ್ನಲ್ಲಿ  ಅಳವಡಿಸಲಾಗುವುದು

http://www.naregaltown.mrc.gov.in/EGF/login/securityLogin.jsp;jsessionid=q7Xu2VIJxO4u73dZ8WfZinft.worker36 

 


ಘನತ್ಯಾಜ್ಯ ವಸ್ತು ಸಂಗ್ರಹಣೆ

                           ಪಟ್ಟಣ ಪಂಚಾಯಿತಿಯ 17 ವಾರ್ಡ್ ಗಳ ಘನ ತ್ಯಾಜ್ಯ ವಸ್ತು ನಿರ್ವಹಣೆಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ನಿರ್ವಹಿಸಲಾಗುತ್ತಿದೆ. ಇದರಲ್ಲಿ ಪ್ರಾಥಮಿಕ ಸಂಗ್ರಹಣೆ, ಬೀದಿಗುಡಿಸುವುದು, ಮತ್ತು ಸಾಗಾಣಿಕೆ ಸೇರಿಕೊಂಡಿರುತ್ತದೆ. ಪಟ್ಟಣದ ಎಲ್ಲಾ 17 ವಾರ್ಡುಗಳಲ್ಲಿ ಮನೆ-ಮನೆ ಕಸ ಸಂಗ್ರಹಣೆಯನ್ನು ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪಟ್ಟಣ ಪಂಚಾಯಿತಿಯ ಸಹಾಯವಾಣಿ ಸಂಖ್ಯೆ: 08381-268228 ಸಂಪರ್ಕಿಸುವುದು. ಸಾರ್ವಜನಿಕರು ಪಟ್ಟಣವನ್ನು ಸ್ವಚ್ಚವಾಗಿಡಲು ಸಹಕರಿಸಿ.

ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ, ನರೇಗಲ್ಲ


 ನಗರ ಸ್ಥಳೀಯ ಸಂಸ್ಥೆಗಳ ಧ್ಯೇಯೋದ್ಧೇಶಗಳು


                               ಇಂದು ನಗರ ಜೀವನ ವ್ಯವಸ್ಥೆಯು ಸಮರ್ಪಕವಾಗಿರಲು ಸರ್ಕಾರವು ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ.ಈಗ ಪಟ್ಟಣ ಪಂಚಾಯಿತಿಯ ಮುಖಾಂತರ ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದು,ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿದಾಗ ನಗರ ನಿರ್ವಹಣೆ ಕಷ್ಟವಾದುದೇನಲ್ಲ. ಇವರೆಲ್ಲರಲ್ಲಿ ಆಡಳಿತ ನಿರ್ವಹಣಾ ಕೌಶಲ್ಯಗಳು ವೃದ್ದಿಗೊಳ್ಳಬೇಕು. ಮಾಹಿತಿ ತಂತ್ರಜ್ಞಾನದ ಮೂಲಕ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು ಸುಲಲಿತವಾಗಿ ಅನುಷ್ಠಾನಗೊಳ್ಳಬೆಕು.ಹಣಕಾಸು ನಿರ್ವಹಣೆಯಲ್ಲಿ ಮತ್ತು ಇತರೆ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು.

ಅದರಂತೆ ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶಗಳು ಕೆಳಕಂಡಂತಿವೆ:

 • ಪಟ್ಟಣ, ನಗರಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು.
 • ಭೂಮಿಯ ಉಪಯೋಗವನ್ನು ನಿಯಂತ್ರಿಸುವುದು.
 • ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು.
 • ರಸ್ತೆಗಳು ಮತ್ತು ಸೇತುವೆಗಳನ್ನು ನಿಮಿðಸುವುದು.
 • ಮನೆ ಬಳಕೆ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ನೀರು ಸರಬರಾಜು ಮಾಡುವುದು.
 • ಜನರ ಆರೋಗ್ಯ, ನೈಮðಲ್ಯ ಕಾಪಾಡುವುದು.
 • ಸಮಾಜದ ದುಬðಲ ವಗðಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.
 • ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ.
 • ಕೊಳಚೆ ಪ್ರದೇಶಗಳ ಅಭಿವೃದ್ದಿ ಹಾಗೂ ನಗರದ ಬಡತನ ನಿವಾರಣೆ.
 • ಬೀದಿದೀಪ, ಬಸ್ ನಿಲ್ದಾಣ, ಸಾವðಜನಿಕ ಶೌಚಾಲಯಗಳಂಥ ಮೂಲಸೌಕಯðಗಳನ್ನು ಒದಗಿಸುವುದು.
 • ಸ್ಮಶಾನ ಮತ್ತು ಸ್ಮಶಾನ ಭೂಮಿ,ಅಂತ್ಯ ಸಂಸ್ಕಾರ,ಸುಡುವಿಕೆಗೆ ಭೂಮಿ ಮತ್ತು ವಿದ್ಯುತ್ ಚಿತಾಗಾರ ಸೌಕರ್ಯಗಳನ್ನು ಒದಗಿಸುವುದು.
 • ಜನನ-ಮರಣ ನೊಂದಣಿಯೂ ಸೇರಿದಂತೆ ಮುಖ್ಯವಾದ ಜನನ ಮತ್ತು ಮರಣ ಅಂಕಿ ಅಂಶಗಳನ್ನು ಒದಗಿಸುವುದು.
 • ಕಸಾಯಿಖಾನೆಗಳ ನಿಯಂತ್ರಣ.
 • ಸರ್ಕಾರದ ಮಂಜೂರಾತಿಗೆ ಒಳಪಟ್ಟು ಸ್ಥಳೀಯವಾಗಿ ತೆರಿಗೆ ವಿಧಿಸುವ, ತೆರಿಗೆ ಸಂಗ್ರಹಿಸುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳು ಹೊಂದಿವೆ.
 • ಆಸ್ತಿ ತೆರಿಗೆ, ಜಾಹಿರಾತು ತೆರಿಗೆ ಮತ್ತಿತರ ಶುಲ್ಕಗಳ ವಸೂಲಾತಿಯ ಮೇಲ್ವಿಚಾರಣೆ.
 • ರಸ್ತೆ, ಬೀದಿಗಳ ದುರಸ್ತಿ ಮತ್ತು ನಿರ್ವಹಣೆ.
 • ಅಪಾಯಕಾರಿ ರೋಗಗಳ ನಿಯಂತ್ರಣ.

   ಇವುಗಳು ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶಗಳಾಗಿದ್ದು ಸ್ಥಳೀಯ ಸಂಸ್ಥೆಯು ಸಾರ್ವಜನಿಕ ಸೌಲಭ್ಯ ರಚನೆ ಮತ್ತು ನಿರ್ವಹಣೆಯಲ್ಲಿ  ಸದಾ ತೊಡಗಿರುತ್ತದೆ.


 

 


 

 

 

 

 

 

 

ಈ ಪುಟವು ಮುಖ್ಯಾಧಿಕಾರಿಗಳು, ಪ.ಪಂ.ನರೇಗಲ್ಲ ರವರು ನಿರ್ವಹಣೆ ಮಾಡುತ್ತಿರುತ್ತಾರೆ

No. Of Visitors :
Last Updated   : 17/10/2015  Release History
Release 2.0.0, Powered By Karnataka Municipal Data Society & maintained by Naregal TP
This website can best viewed with the resolution 1024 * 768 using Internet Explorer 7.0 or above.
Valid CSS!